WEL COME TO AREYURU CHI.SURESH WEBSITE
 
ಅರೆಯೂರು ಚಿ.ಸುರೇಶ್
ಅರೆಯೂರು ಚಿ.ಸುರೇಶ್ ಕನ್ನಡಿಗರ ಹೆಮ್ಮೆ!  
  ಮುಖ ಪುಟ
  ನಮ್ಮ ಸಂಪರ್ಕಗಳು
  ನಮ್ಮ ಬಗ್ಗೆ
  ಲೇಖನಗಳು
  ನನ್ನ ಮಿತ್ರರು
  ಪುಸ್ತಕಗಳು
  ನನ್ನಕವನಗಳು
  ನನ್ನ ಕನಸುಗಳು
  ನನ್ನ ಚಿತ್ರಗಳು
copyright:- ಅರೆಯೂರು ಚಿ.ಸುರೇಶ್
ಮುಖ ಪುಟ

ಹೊಸ ವರ್ಷಕ್ಕೆ ಎರಡು ಹೊಸ ಜೀವಗಳ ನಿರೀಕ್ಷೆ...

 
ಹೌದು,  ಹೊಸ ವರ್ಷ ೨೦೧೧ಕ್ಕೆ ನಮ್ಮ ಮನೆಗೆ  ಎರಡು ಹೊಸ ಜೀವಗಳ ಆಗಮನವಾಗುತ್ತವೆ.
ಮೊದಲಿಗೆ, ಕೃಷ್ಣಣ್ಣನ ಹೆಂಡತಿಯಾಗಿ, ನಮ್ಮನೆಯ ಮಹಾಲಕ್ಷ್ಮಿಯಾಗಿ, ನನ್ನ ಅತ್ತಿಗೆಯಾಗಿ, ಬರುವ ವರಲಕ್ಷ್ಮಿ.
ನಂತರ, ನನ್ನ ಮುದ್ದಿನ ತಂಗಿ, ಅಮ್ಮಯ್ಯನ, (ಶ್ರೀಮತಿ ಶಶಿಕಲಾರುದ್ರೇಶ್, ಮಲ್ಲಸಂದ್ರ.) ಹೊಟ್ಟೆಯಲ್ಲಿ, ಹುಟ್ಟುವ ಆ ಹೊಸ ಜೀವ ನಮಗೆಲ್ಲ  ಹೊಸ ಉತ್ಸಾಹ, ಬರವಸೆ ಮೂಡಿಸಿದೆ.
 ಹುಟ್ಟುವ ಆ ಹೊಸ ಜೀವ, ಹೆಣ್ಣಾಗಲಿ ಎಂಬುದು ನಮ್ಮನೆಯವರ ಆಶೆ. ಗಂಡಾಗಲಿ, ಎಂಬುದು ಮಲ್ಲಸಂದ್ರದವರ ಆಶೆ. ಗಂಡಾಗಲಿ, ಹೆಣ್ಣಾಗಲಿ, ನಮ್ಮನೆಗಂತೂ ಒಂದು ಹೊಸ ಜೀವ ಆಗಮನವಾಗುತ್ತದೆ.

WWW.AREYURUSURESH.BLOGSPOT.COM 

 

 

 

 

 

ಕವಿತೆ ಹುಟ್ಟಿತೆ ?

 
ಕವಿತೆ ಹುಟ್ಟಿತೆ


 

ಸ್ಪರ್ಧೆಗಾಗಿ ಕವಿತೆ ಹುಟ್ಟಿತೆ ?

ನಿಸರ್ಗದ ಅಂತರಾಳದಲ್ಲಿ

ಅನುಭವದ ಬುತ್ತಿಯಲ್ಲಿ
 
ಅರಳಲಾರದ ಕವಿತೆ
 
ಗೀಜಿಗುಡುವ ಈ ಕಾಂಕ್ರಿಟ್ ಕಾಡಿನಲ್ಲಿ
 
ದುಗುಡದ ತಳಮಳದಲ್ಲಿ ಹುಟ್ಟಿತೆ ಕವಿತೆ ?
 
ಬೆಟ್ಟದ ಕಲ್ಲುಬಂಡೆ ಶಿಲೆಯಾಗಲು
 
ಅದೆಷ್ಟು ಉಳಿಗಳ ಹೊಡೆತ ?
ಶಿಲ್ಪಿಯ ಭಯಂಕರ ಸಹನೆ ?
 
ಮಂದಹಾಸದಲ್ಲಿ ನಗದ ಶಿಲೆ
 
ತಳಮಳದಲ್ಲಿ ಅರಳುವುದೇ ಕಲೆ ?
 
ಹೀಗೆ .... ಧೀಡಿರನೆ
 
ಕವಿತೆ ಹುಟ್ಟುವಂತಿದ್ದರೆ ...
 
ಇಷ್ಟೋತ್ತಿಗೆ ನಾನು ಪ್ರಕಟಿಸಿ ಬಿಟ್ಟಿರುತ್ತಿದ್ದೆ
 
ಕವನ ಸಂಕಲನಗಳ
 
ಸ್ಪರ್ಧೆಗಾಗಿ ಕವಿತೆ ಹುಟ್ಟಿತೆ ?
 
ಗರ್ಭಕಟ್ಟಿ ನವಮಾಸಗಳ ಕಾಲ
 
ತಾಯ ಗರ್ಭದಲ್ಲಿ ಬೆಳೆದ ಮಗುವಿನ
 
ಜನನವೆ ಎಷ್ಟೊಂದು ಕಷ್ಟಕರ
 
ಅಂತಹುದರಲ್ಲಿ ... ಸ್ಪರ್ಧೆಗಾಗಿ
 
ಗರ್ಭವನ್ನೇ ಕಟ್ಟದೆ
 
ಧಿಡೀರನೆ ಕವಿತೆ
 
ಹುಟ್ಟುವುದಾದರೂ ಹೇಗೆ ?
ಹೇಳಿ... ಕವಿತೆ ಹುಟ್ಟಿತೆ ?
                                                                                                                   
ಮಂಡ್ಯ ತಾಲ್ಲೋಕು ಸಾಹಿತ್ಯ ಸಮ್ಮೇಳನ (೨೧ - ೩ -೨೦೦೯ )ಕವನ ವಾಚನ ಸಂದರ್ಭ

ಅರೆಯೂರು ಚಿ.ಸುರೇಶ್ , ಪತ್ರಕರ್ತರು

 
 

 
ಅರೆಯೂರು ಚಿ.ಸುರೇಶ್
ಪತ್ರಕರ್ತರು,
ಅ.ವೈದ್ಯನಾಥಪುರ-೫೭೨೧೧೮
ಅರೆಯೂರು ಅಂಚೆ
ತುಮಕೂರು ತಾ.,ಜಿಲ್ಲೆ.

 
 
 ಹೋಂ 


 



ಲಹರಿ 
ಬೆಚ್ಚಗಿನ  ನೆನಪೇ,
ಏಕೋ ನಿನ್ನ ಹೆಸರನ್ನು ಬರೆಯಲು ಕೈ ಸೋಲುತ್ತವೆ.ಅಷ್ಟಕ್ಕೂ ನಿನ್ನ ಹೆಸರೇನೆಂದು ನನಗಾದರೂ ಎಲ್ಲಿ ಗೊತ್ತು? ಪ್ರೀತಿಗೆ,ಹೆಸರು ಜಾತಿ ಅಂತಸ್ತು ಯಾವುದು ಬೇಕು? ಸುರಿವ ಮಳೆಗೆ ಸುಡುವ ಬಿಸಿಲಿಗೆ ಹರಿವ ನದಿಗೆ ಜಾತಿ ಉಂಟಾ? ಹೆಸರುಂಟ? ಇಬ್ಬನಿಗ್ಯಾವ ಜಾತಿ? ಯಾವ ಕುಲ?
ಮುಂಜಾನೆ ಇಬ್ಬನಿಯಿಂದ ನೆಂದು ಮುದ್ದೆಯಾದ ಹೂವು ಆ ಸೂರ್ಯನ ಎಳೆಬಿಸಿಲಿಗೆ ಅದೆಂತಹ ಬಣ್ಣ ಥಳ ಥಳ ಪಳ ಪಳ ಈ ಪ್ರೀತಿನೂ ಅಂತದ್ದೇ ಕಣೇ ಹುಡುಗಿ. ನೀನೊಂದು ಗುಲಾಬಿ ಹೂವು, ನಾನು ಇಬ್ಬನಿ ಸೂರ್ಯನ ಎಳೆ ಬಿಸಿಲೇ ನಮ್ಮಿಬ್ಬರ  ಪ್ರೀತಿ!
ಹುಚ್ಚ ಅಂತಿಯಾ?
 ಹೌದು ಕಣೇ ನಿನ್ನ ನೋಡಿದ ದಿನದಿಂದಲೂ ನಾನು ಹುಚ್ಚನೆ.ನಿನ್ನ ಪ್ರೀತಿಯ ಹುಚ್ಚ.
    ನೀನು ಬಂದ ಮೇಲೆ ತಾನೇ
    ಇಷ್ಟು ಚಂದ ಈ ಬಾಳು
    ನೀನೆ ತಾನೇ ಹೇಳಿ ಕೊಟ್ಟೆ ಪ್ರಿತಿಸಲೂ...
ಆದರೂ ನಾನು ನಿನ್ನ ಮುಂದೆ ಎಂದಿಗೂ ಹುಚ್ಚುಚ್ಚಾಗಿ ಆಡಿಲ್ಲ. ನೀನು ಎದುರಲ್ಲಿ ಬಂದಾಗ ಸೈಲೆಂಟಾಗಿ ಸೈಡ್ ಬಿಟ್ಟಿದ್ದೇನೆ. ನೀನು ನನ್ನ ಸನಿಹದಲ್ಲಿ ಹೊಗುತಿದ್ದರೆನನ್ನ ಎದೆಯಲ್ಲಿ ಮಿಂಚಿನಂತ ವಿದ್ಯುತ್ ಸಂಚಾರ...
  ಏನೋ ಒಂಥರಾ...ಈ ಪ್ರೀತಿಯು...
   ಈ ರೀತಿಯು ಮನಸ್ಸೆಲ್ಲಾ.....
ಹೌದು ಕಣೇ , ನನ್ನ ಕನಸು ಮನಸ್ಸೆಲ್ಲಾ ನೀನೆ . ಮುಂಜಾನೆಯ ಮೈ ನಡುಗಿಸುವ ಚಳಿಯಲ್ಲೂ ನಿನ್ನದೇ ಸಿಹಿ ಕನಸು .

 


ಆತ್ಮಹತ್ಯೆ

 
ಇದು ನಾನು ಬರೆಯಲೆತ್ನಿಸಿರುವ ಮೊದಲ ಲಲಿತ ಪ್ರಬಂಧ
*************************************************
ಜಗಳಗಳಿಗೆ ಕಾರಣ ಬೇಕಿಲ್ಲ, ಯುದ್ಧಗಳಿಗೂ ಇತ್ತೀಚೆಗೆ ಹೇಳಿಕೊಳ್ಳುವಂತಹ ಮುಖ್ಯಕಾರಣ ಬೇಕಿಲ್ಲ. ನಮ್ಮ ಮನೆಯಲ್ಲಿ ನಡೆದಿದ್ದು ಜಗಳವೋ, ಯುದ್ಧವೋ ಗೊತ್ತಿಲ್ಲ.
 
 
ನಮ್ಮ ಸಂಪರ್ಕಗಳು  
  ಅರೆಯೂರು ಚಿ.ಸುರೇಶ್
ಪತ್ರಕರ್ತರು,
ಅ.ವೈದ್ಯನಾಥಪುರ-572118
ಅರೆಯೂರು ಅಂಚೆ
ತುಮಕೂರು ತಾ.,ಜಿಲ್ಲೆ.
 
MOBILE  
  9620656604  
e-mail  
  areyurusuresh@gmail  
MY BLOG  
  www.areyurusuresh.blogspot.com  
YOUTUBE  
  www.youtube.com/areyurusuresh
 
www.areyurusuresh.blogspot.com This website was created for free with Own-Free-Website.com. Would you also like to have your own website?
Sign up for free