ಅರೆಯೂರು ಚಿ.ಸುರೇಶ್ - ಮುಖ ಪುಟ
|
|
ಅರೆಯೂರು ಚಿ.ಸುರೇಶ್
ಅರೆಯೂರು ಚಿ.ಸುರೇಶ್ ರವರು ತುಮಕೂರು ಜಿಲ್ಲೆಯ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಯ ಅರೆಯೂರು ಗ್ರಾಮದ ಶ್ರೀಮತಿ ಜಯಮ್ಮ, ಶ್ರೀ ಚಿಕ್ಕಮಾದಯ್ಯನವರ ದ್ವಿತೀಯ ಪುತ್ರನಾಗಿ 1983 ರ ಆಗಸ್ಟ್ 30ನೇ ತಾರೀಖು ಜನಿಸಿದ ಇವರ ಮೊದಲ ಹೆಸರು ಲೋಕೇಶ್ ನಂತರ ಮನೆಯವರು ಪ್ರೀತಿಯಿಂದ ಸೂರಿ ಎಂದು ಕರೆದು, ಶಾಲೆಯಲ್ಲಿ ಎ.ಸಿ ಸುರೇಶ್ ಎಂದು ದಾಖಲಾಗಿ, ಅರೆಯೂರು ಚಿಕ್ಕಮಾದಯ್ಯ ಸುರೇಶ್ ಅಲಿಯಾಸ್ ಅರೆಯೂರು ಚಿ.ಸುರೇಶ್ ರವರು ಪ್ರಾಥಮಿಕ ಶಿಕ್ಷಣವನ್ನು ಅರೆಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಅರೆಯೂರು ಗ್ರಾಮದ ಶ್ರೀ ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿ ಹಾಲನೂರು ಗ್ರಾಮದ ಶ್ರೀ ಸಿದ್ಧಗಂಗಾ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ತುಮಕೂರು ನಗರದ ಶಿರಾಗೇಟ್ ನಲ್ಲಿರುವ ಕ್ರಿಶ್ಚಿಯನ್ ಯೂನಿಯನ್ ಕಾಲೇಜಿನಲ್ಲಿ ಬಿ.ಎ. ಪದವಿ ಮುಗಿಸಿ, ವಿದ್ಯೋದಯ ಕಾನೂನು ಕಾಲೇಜಿಗೆ ದಾಖಲಾಗಿ ಎರಡು ವರ್ಷಗಳ ಕಾಲ ಕಾನೂನು ಅಭ್ಯಾಸ ಮಾಡಿ, ತಮ್ಮ ಓದನ್ನು ಅರ್ಧದಲ್ಲೇ ಮೊಟಕುಗೊಳಿಸಿ, ತುಮಕೂರಿನ ಅಮರ ಸಂದೇಶ ಸಂಜೆ ಪತ್ರಿಕೆ, ತುಮಕೂರು ವಾರ್ತೆ, ನಗೆಮುಗುಳು, ಪತ್ರಿಕೆಗಳಲ್ಲಿ ವರದಿಗಾರರಾಗಿ, ಅಂಕಣಕಾರರಾಗಿ, ಕಥೆ, ಕವಿತೆ, ಹಾಸ್ಯ ಲೇಖನ, ವ್ಯಂಗ್ಯಚಿತ್ರ, ಚುಟುಕು ಸೇರಿದಂತೆ ಹಲವು ಸಾಹಿತ್ಯ ಪ್ರಾಕಾರಗಳಲ್ಲಿ ಕೃಷಿ ಮಾಡಿರುವ ಅರೆಯೂರು ಚಿ.ಸುರೇಶ್ ರವರು, ಅರೆಯೂರು ಚಿ.ಸುರೇಶ್, ಅರೆಯೂರು ಸುರೇಶ್, ಕಾವ್ಯ ಮಧುಗಿರಿ, ಮಾಣಿಕ್ಯ ಮಡಿಕೇರಿ, ಅರೆಯೂರು ಶ್ರೀ ವೈದ್ಯಸುತ, ಅಚಿಸು, ನಾದಪ್ರೀಯ, ಭಾರತಿಪ್ರೀಯ, ಅರೆಯೂರು ಕಾವ್ಯಸುತ, ಎಂಬ ಹಲವಾರು ಕಾವ್ಯನಾಮದಿಂದ ಹಲವಾರು ಲೇಖನಗಳನ್ನು, ಕಥೆ ಕವನಗಳನ್ನು ರಚಿಸಿದ್ದಾರೆ
ಅರೆಯೂರು ಚಿ.ಸುರೇಶ್ ರವರ ಲೇಖನಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಪ್ರಜಾವಾಣಿ, ಸುಧಾ, ಮಯೂರ, ತುಷಾರ, ಉದಯವಾಣಿ, ಉದಯಕಾಲ,,ಮಲ್ಲಿಗೆ ಮಾಸಪತ್ರಿಕೆ, ನವರಾಗಸಂಗಮ, ಸಖಿ, ನಿಮ್ಮೆಲ್ಲರ ಮಾನಸ, ಮಾಣಿಕ್ಯ, ಓ ಮನಸೇ, ಹಾಯ್ ಬೆಂಗಳೂರ್, ಸಂಜೆವಾಣಿ, ಗೃಹಶೋಭ, ಯುಗಪುರುಷ, ನಗೆಮುಗುಳು, ಪ್ರಜಾಪ್ರಗತಿ, ಪ್ರಜಾಮನ, ತುಮಕೂರು ಮಿತ್ರ, ಗೋವ ರಾಜ್ಯದಿಂದ ಪ್ರಕಟವಾಗುತಿದ್ದ ಗೋವ ದರ್ಪಣ, ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ
ಅಂತರ್ಜಾಲ ಪತ್ರಿಕೆಗಳಾದ ಪಂಜು, ಅವಧಿ, ಸಂಪದ, ವಿಶ್ವ ಕನ್ನಡಿಗ ನ್ಯೂಸ್, ಕನ್ನಡ ಆನ್ ಲೈನ್ ನ್ಯೂಸ್, ಕನ್ನಡ ನ್ಯೂಸ್ ನೌ ಸೇರಿದಂತೆ ಹಲವು ತಾಣಗಳಲ್ಲಿ ಲೇಖನ, ಕಥೆ ಕವಿತೆ ಪ್ರಕಟಗೊಂಡಿವೆ
ಅರೆಯೂರು ಚಿ.ಸುರೇಶ್ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಪತ್ರಿಕೆಗಳು ಅರೆಯೂರು ಪತ್ರಿಕೆ, ಅರೆಯೂರು ನ್ಯೂಸ್, ಬಡವರ ಕೂಗು, ಸುದ್ದಿ ಸಮಾಚಾರ, ಕನ್ನಡ ಇ ನ್ಯೂಸ್, ತುಳು ನ್ಯೂಸ್ ಪ್ರಮುಖವಾದವುಗಳು
ವಾಲ್ಮೀಕಿ ಮಿತ್ರ ಪತ್ರಿಕೆಯಲ್ಲಿ ಕಾರ್ಯಕಾರಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದು, ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಗುಬ್ಬಿ ತಾಲ್ಲೂಕು ವರದಿಗಾರರಾಗಿ, ಪ್ರಜಾಮನ ಪತ್ರಿಕೆ ಯಲ್ಲಿ ವಿಶೇಷ ವರದಿಗಾರರಾಗಿ ತುಮಕೂರು ವಾರ್ತೆ, ಅಮರ ಸಂದೇಶ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ
ಅರೆಯೂರು ಚಿ.ಸುರೇಶ್ ರವರಿಗೆ ಕಾವ್ಯಶ್ರೀ, ಹೆಮ್ಮೆಯ ಕನ್ನಡಿಗ, ಕನ್ನಡ ಮಾಣಿಕ್ಯ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ
ತುಮಕೂರು ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದ ಅರೆಯೂರು ಚಿ.ಸುರೇಶ್ ರವರು ದೂರದ ಕರಾವಳಿ ಭಾಗದ ತುಳು ಭಾಷೆಯ ತುಳು ನ್ಯೂಸ್ ಆನ್ಲೈನ್ ಪತ್ರಿಕೆ ಮಾಡಿ ತುಳು ನಾಡಿನ ತುಳು ಭಾಷಿಕರಿಗೆ ತುಳು ಭಾಷೆಯಲ್ಲಿ ಸುದ್ದಿ ನೀಡುತ್ತಿರುವ ಕಾರ್ಯ ಶ್ಲಾಘನೀಯ
ಕವಿತೆ ಹುಟ್ಟಿತೆ
ಸ್ಪರ್ಧೆಗಾಗಿ ಕವಿತೆ ಹುಟ್ಟಿತೆ ?
ನಿಸರ್ಗದ ಅಂತರಾಳದಲ್ಲಿ
ಅನುಭವದ ಬುತ್ತಿಯಲ್ಲಿ
ಅರಳಲಾರದ ಕವಿತೆ
ಗೀಜಿಗುಡುವ ಈ ಕಾಂಕ್ರಿಟ್ ಕಾಡಿನಲ್ಲಿ
ದುಗುಡದ ತಳಮಳದಲ್ಲಿ ಹುಟ್ಟಿತೆ ಕವಿತೆ ?
ಬೆಟ್ಟದ ಕಲ್ಲುಬಂಡೆ ಶಿಲೆಯಾಗಲು
ಅದೆಷ್ಟು ಉಳಿಗಳ ಹೊಡೆತ ?
ಶಿಲ್ಪಿಯ ಭಯಂಕರ ಸಹನೆ ?
ಮಂದಹಾಸದಲ್ಲಿ ನಗದ ಶಿಲೆ
ತಳಮಳದಲ್ಲಿ ಅರಳುವುದೇ ಕಲೆ ?
ಹೀಗೆ .... ಧೀಡಿರನೆ
ಕವಿತೆ ಹುಟ್ಟುವಂತಿದ್ದರೆ ...
ಇಷ್ಟೋತ್ತಿಗೆ ನಾನು ಪ್ರಕಟಿಸಿ ಬಿಟ್ಟಿರುತ್ತಿದ್ದೆ
ಕವನ ಸಂಕಲನಗಳ
ಸ್ಪರ್ಧೆಗಾಗಿ ಕವಿತೆ ಹುಟ್ಟಿತೆ ?
ಗರ್ಭಕಟ್ಟಿ ನವಮಾಸಗಳ ಕಾಲ
ತಾಯ ಗರ್ಭದಲ್ಲಿ ಬೆಳೆದ ಮಗುವಿನ
ಜನನವೆ ಎಷ್ಟೊಂದು ಕಷ್ಟಕರ
ಅಂತಹುದರಲ್ಲಿ ... ಸ್ಪರ್ಧೆಗಾಗಿ
ಗರ್ಭವನ್ನೇ ಕಟ್ಟದೆ
ಧಿಡೀರನೆ ಕವಿತೆ
ಹುಟ್ಟುವುದಾದರೂ ಹೇಗೆ ?
ಹೇಳಿ... ಕವಿತೆ ಹುಟ್ಟಿತೆ ?
ಮಂಡ್ಯ ತಾಲ್ಲೋಕು ಸಾಹಿತ್ಯ ಸಮ್ಮೇಳನ (೨೧ - ೩ -೨೦೦೯ )ಕವನ ವಾಚನ ಸಂದರ್ಭ
ಅರೆಯೂರು ಚಿ.ಸುರೇಶ್
ಪತ್ರಕರ್ತರು,
ಅ.ವೈದ್ಯನಾಥಪುರ-೫೭೨೧೧೮
ಅರೆಯೂರು ಅಂಚೆ
ತುಮಕೂರು ತಾ.,ಜಿಲ್ಲೆ.
ಲಹರಿ
ಬೆಚ್ಚಗಿನ ನೆನಪೇ,
ಏಕೋ ನಿನ್ನ ಹೆಸರನ್ನು ಬರೆಯಲು ಕೈ ಸೋಲುತ್ತವೆ.ಅಷ್ಟಕ್ಕೂ ನಿನ್ನ ಹೆಸರೇನೆಂದು ನನಗಾದರೂ ಎಲ್ಲಿ ಗೊತ್ತು? ಪ್ರೀತಿಗೆ,ಹೆಸರು ಜಾತಿ ಅಂತಸ್ತು ಯಾವುದು ಬೇಕು? ಸುರಿವ ಮಳೆಗೆ ಸುಡುವ ಬಿಸಿಲಿಗೆ ಹರಿವ ನದಿಗೆ ಜಾತಿ ಉಂಟಾ? ಹೆಸರುಂಟ? ಇಬ್ಬನಿಗ್ಯಾವ ಜಾತಿ? ಯಾವ ಕುಲ?
ಮುಂಜಾನೆ ಇಬ್ಬನಿಯಿಂದ ನೆಂದು ಮುದ್ದೆಯಾದ ಹೂವು ಆ ಸೂರ್ಯನ ಎಳೆಬಿಸಿಲಿಗೆ ಅದೆಂತಹ ಬಣ್ಣ ಥಳ ಥಳ ಪಳ ಪಳ ಈ ಪ್ರೀತಿನೂ ಅಂತದ್ದೇ ಕಣೇ ಹುಡುಗಿ. ನೀನೊಂದು ಗುಲಾಬಿ ಹೂವು, ನಾನು ಇಬ್ಬನಿ ಸೂರ್ಯನ ಎಳೆ ಬಿಸಿಲೇ ನಮ್ಮಿಬ್ಬರ ಪ್ರೀತಿ!
ಹುಚ್ಚ ಅಂತಿಯಾ?
ಹೌದು ಕಣೇ ನಿನ್ನ ನೋಡಿದ ದಿನದಿಂದಲೂ ನಾನು ಹುಚ್ಚನೆ.ನಿನ್ನ ಪ್ರೀತಿಯ ಹುಚ್ಚ.
ನೀನು ಬಂದ ಮೇಲೆ ತಾನೇ
ಇಷ್ಟು ಚಂದ ಈ ಬಾಳು
ನೀನೆ ತಾನೇ ಹೇಳಿ ಕೊಟ್ಟೆ ಪ್ರಿತಿಸಲೂ...
ಆದರೂ ನಾನು ನಿನ್ನ ಮುಂದೆ ಎಂದಿಗೂ ಹುಚ್ಚುಚ್ಚಾಗಿ ಆಡಿಲ್ಲ. ನೀನು ಎದುರಲ್ಲಿ ಬಂದಾಗ ಸೈಲೆಂಟಾಗಿ ಸೈಡ್ ಬಿಟ್ಟಿದ್ದೇನೆ. ನೀನು ನನ್ನ ಸನಿಹದಲ್ಲಿ ಹೊಗುತಿದ್ದರೆನನ್ನ ಎದೆಯಲ್ಲಿ ಮಿಂಚಿನಂತ ವಿದ್ಯುತ್ ಸಂಚಾರ...
ಏನೋ ಒಂಥರಾ...ಈ ಪ್ರೀತಿಯು...
ಈ ರೀತಿಯು ಮನಸ್ಸೆಲ್ಲಾ.....
ಹೌದು ಕಣೇ , ನನ್ನ ಕನಸು ಮನಸ್ಸೆಲ್ಲಾ ನೀನೆ . ಮುಂಜಾನೆಯ ಮೈ ನಡುಗಿಸುವ ಚಳಿಯಲ್ಲೂ ನಿನ್ನದೇ ಸಿಹಿ ಕನಸು .
ಇದು ನಾನು ಬರೆಯಲೆತ್ನಿಸಿರುವ ಮೊದಲ ಲಲಿತ ಪ್ರಬಂಧ
*************************************************
ಜಗಳಗಳಿಗೆ ಕಾರಣ ಬೇಕಿಲ್ಲ, ಯುದ್ಧಗಳಿಗೂ ಇತ್ತೀಚೆಗೆ ಹೇಳಿಕೊಳ್ಳುವಂತಹ ಮುಖ್ಯಕಾರಣ ಬೇಕಿಲ್ಲ. ನಮ್ಮ ಮನೆಯಲ್ಲಿ ನಡೆದಿದ್ದು ಜಗಳವೋ, ಯುದ್ಧವೋ ಗೊತ್ತಿಲ್ಲ.
|
|
|